ಭಾರತೀಯ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಸ್ಮಾರ್ಟ್‌ಫೋನ್‌ಗಳು ಕಾಣಿಸಿಕೊಳ್ಳುತ್ತಿದ್ದು, ಅದರಲ್ಲಿಯೂ ಬಜೆಟ್ ಬೆಲೆಯ ಫೋನ್‌ಗಳು ಹೆಚ್ಚಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಶಿಯೋಮಿ ಬಿಡುಗಡೆ ಮಾಡಿರುವ ರೆಡ್‌ಮಿ 5A ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಇದಕ್ಕೆ ಭರ್ಜರಿ ಸ್ಪರ್ಧೆಯನ್ನು ನೀಡುವ ಸಲುವಾಗಿ ಬಂದಿದೆ 10.or D ಸ್ಮಾರ್ಟ್‌ಪೋನ್. 10.or ಕಂಪನಿಯೂ ಈಗಾಗಲೇ ಮಾರುಕಟ್ಟೆಗೆ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಎರಡು ಫೋನ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈಗ ಹೊಸದಾಗಿ 10.or D ಸ್ಮಾರ್ಟ್‌ಪೋನ್ ಪರಿಚಯ ಮಾಡಿದ್ದು, ಕೇವಲ ರೂ.5000ಕ್ಕೆ ದೊರೆಯಲಿರುವ ಸ್ಮಾರ್ಟ್‌ಫೋನ್ ಎಲ್ಲಾ ಫೀಚರ್‌ಗಳನ್ನು ಒಳಗೊಂಡಿದ್ದು, ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕಲಿದೆ. ಮಾರುಕಟ್ಟೆಯಲ್ಲಿ ರೂ.5000ಕ್ಕೆ ದೊರೆಯುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದರಲ್ಲಿಯೂ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಲು ಸಾಧ್ಯವಲ್ಲಿ ಆದರೆ 10.or D ಸ್ಮಾರ್ಟ್‌ಪೋನ್ ನಲ್ಲಿ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ. ಇದು ಅತೀ ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ.