Surprise Me!

ಹುಡುಗ-ಹುಡುಗಿ ಒಂದೇ ನಕ್ಷತ್ರದವರಾದರೆ ಮದುವೆಯಾಗಬಹುದೇ? | Boldsky Kannada

2020-07-03 106 Dailymotion

ಹಿಂದೂ ಧರ್ಮದಲ್ಲಿ ಮದುವೆಯಾಗುವಾಗ ಜಾತಕ, ಕುಂಟಲಿ, ನಕ್ಷತ್ರ, ಗಣ ಇವೆಲ್ಲಾ ಹೊಂದಿಕೆಯಾಗುತ್ತದೆಯೇ ಎಂದು ನೋಡುತ್ತಾರೆ. ಮದುವೆಯಾದ ಬಳಿಕ ಗಂಡ-ಹೆಂಡತಿ ನಡುವೆ ಸಾಮರಸ್ಯ ಇರಬೇಕು, ಸುಖವಾಗಿ ಸಮಸಾರ ನಡೆಸಬೇಕೆಂದರೆ ಇವೆಲ್ಲಾ ಸರಿ ಹೊಂದಬೇಕೆಂಬ ನಮ್ಮಲ್ಲಿ ಇದೆ.
ಕೆಲವು ಮದುವೆಗಳಾಗಿ ಸ್ವಲ್ಪ ದಿನದಲ್ಲಿ ಆ ಕುಟುಂಬದಲ್ಲಿ ತೊಂದರೆ ಕಾಣಿಸಿದರೆ ಜಾತಕ ದೋಷ ಇತ್ತೆಂದೋ, ಇಲ್ಲಾ ಲವ್‌ ಮ್ಯಾರೇಜ್‌ ಆದವರ ಬದುಕಿನಲ್ಲಿ ಏನಾದರೂ ತೊಂದರೆಯಾಗ ಜಾತಕ, ನಕ್ಷತ್ರ ಎಲ್ಲಾ ನೋಡದೆ ಮದುವೆಯಾಗಿದ್ದಕ್ಕೆ ಹಾಗಾಯಿತು ಎಂದೆಲ್ಲಾ ಹೇಳುತ್ತಾರೆ. ಏನೂ ನೋಡದೆ ಮದುವೆಯಾಗಿ ಚೆನ್ನಾಗಿರುವ ಎಷ್ಟೋ ಜೋಡಿಗಳಿವೆ, ಅದೇ ರೀತಿ ಎಲ್ಲಾ ಹೊಂದಾಣಿಕೆಯಾಗಿಯೂ ಮುರಿದು ಹೋದ ಮದುವೆಗಳೂ ಎಷ್ಟೋ ಇವೆ, ಆದರೆ ಎಲ್ಲವೂ ಒಂದು ನಂಬಿಕೆ. ನಾವು ಆ ವಿಚಾರ ಇನ್ನೊಮ್ಮೆ ಮಾತನಾಡೋಣ, ಇಲ್ಲಿ ಹುಡುಗ-ಹುಡುಗಿ ಒಂದೇ ನಕ್ಷತ್ರದವರಾದರೆ ಮದುವೆಯಾಗಬಹುದೇ? ಎಂದು ತಿಳಿಯೋಣ:

#nakshatra #astrology #stars