Surprise Me!

JC Madhu Swamy Gives Clarification On Viral Audio | Public TV

2022-08-16 0 Dailymotion

ಸರ್ಕಾರ ನಡೆಯುತ್ತಿಲ್ಲ...ಏನೋ ಮ್ಯಾನೇಜ್ ಮಾಡುತ್ತಿದ್ದೇವೆ ಅನ್ನೋ ಆಡಿಯೋದಿಂದ ಉಂಟಾಗಿದ್ದ ಮುಜುಗರವನ್ನು ತಪ್ಪಿಸಲು ಸ್ವತ: ಕಾನೂನು ಸಚಿವ ಮಾಧುಸ್ವಾಮಿ ಮುಂದಾಗಿದ್ದಾರೆ. ಇದಕ್ಕೆ ಖುದ್ದು ಸ್ಪಷ್ಟನೆ ಕೊಟ್ಟಿರೋ ಮಾಧುಸ್ವಾಮಿ, ಇದು 3 ತಿಂಗಳ ಹಿಂದಿನ ಆಡಿಯೋ ಆಗಿದೆ. ಇದು ನನ್ನ ಆಡಿಯೋನೇ ಆಗಿದ್ದು, ಮುಖ್ಯಮಂತ್ರಿಗಳಿಗೆ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದೇನೆ. ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಪ್ರಶ್ನೆಯೇ ಇಲ್ಲ. ಸಿಎಂ ಕೇಳಿದ್ರೆ ರಾಜೀನಾಮೆ ಕೊಡೋಕೆ ಸಿದ್ದವೆಂದು ಸ್ಪಷ್ಟಪಡಿಸಿದ್ದಾರೆ. ಸಚಿವ ಮಾಧುಸ್ವಾಮಿ ಬೆನ್ನಿಗೆ ಸಿಎಂ ಬೊಮ್ಮಾಯಿ ನಿಂತಿದ್ದಾರೆ. ಮಾಧುಸ್ವಾಮಿ ಜೊತೆ ಈಗಾಗಲೇ ಮಾತನಾಡಿದ್ದೇನೆ. 3 ತಿಂಗಳ ಹಿಂದೆ ಸಹಕಾರ ಇಲಾಖೆಗೆ ಸಂಬಂಧಿಸಿದ ವಿಚಾರದ ಬಗ್ಗೆ ಹೇಳಿದ್ದು ಅದು...ಹಾಗಾಗಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯವೂ ಇಲ್ಲ ಎಂದಿದ್ದಾರೆ.

#publictv #bjp #jcmadhuswamy