Surprise Me!

ಸಿನಿ EXPRESS: ಜಿ ಎಸ್​ ಟಿಯಲ್ಲಿ ಸೃಜನ್​ ಮಸ್ತ್​ ಡಾನ್ಸ್​..!

2025-11-18 19,737 Dailymotion

ಮಜಾ ಟಾಕಿಸ್ ಮೂಲಕ ಮನೆ ಮಾತಾದ ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಈಗ ಜಿ ಎಸ್​ ಟಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅಷ್ಟೆ ಅಲ್ಲ ನಾಯಕನಾಗಿ ನಟಿಸಿದ್ದು, ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ ಆಗಿದೆ. ಇತ್ತೀಚೆಗಷ್ಟೆ ಜಿಎಸ್​ಟಿ ಟ್ರೈಲರ್​ ಅನ್ನ ನಟ ಉಪೇಂದ್ರ ಬಿಡುಗಡೆ ಮಾಡಿದ್ರು. ಈಗ  ಸೃಜನ್ ಲೋಕೇಶ್​ ಜೊತೆ ರವಿಶಂಕರ್​ ಗೌಡ, ನಿವೇಧಿತಾ ಗೌಡ, ನಾಯಕಿ ರಜನಿ ಭಾರದ್ವಾಜ್, ತಬಲಾ ನಾಣಿ, ಗಿರಿಜಾ ಲೋಕೇಶ್​ ಸೇರಿದಂತೆ ಪ್ರತಿಭಾನ್ವಿತ ಕಲಾವಿಧರು ನಟಿಸಿರೋ ಸಿನಿಮಾದ ಸ್ಪೆಷಲ್ ಸಾಂಗ್ ಹೊರ ಬಂದಿದೆ. ಹಾಡಿನಲ್ಲಿ ನಟಿ ಸಂಹಿತಾ ಡಾನ್ಸ್ ಮಾಡಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್  ಜಿಎಸ್​ಟಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.